Index   ವಚನ - 379    Search  
 
ಅಂದು ಕುಲಾಚಾರ ಶಿವಾಚಾರ ಎರಡು ಇದ್ದ ಕಾರಣದಿಂದ ಕುಂದು ಬಂತು ಕುಲಹೊಲೆಗೆ. ಹೊಂದಿದ ಕ್ರಿಯಸಂಸರ್ಗದಿಂದ ಕೀಲು ಬಾಯಿ ಉರಸ್ಥಲ. ನಿಂದು ಪಂಚಪರುಷವ ತಂದುಬಾಜಿಗಾರನ ಆಟ ಎನಿಸಿತ್ತು. ಅಂದು ದೃಷ್ಟ ಪ್ರತ್ಯಕ್ಷ ಇದ್ದು ಅನಾಚಾರಿ ಎಂದು ನಾದವೇರಿತ್ತು. ಕುಂದಿನ ಈ ಮಾಟದಿಂದವೆ ತಿರುಗಬೇಕಾಯಿತು. ಅಂದು ಮರೆತ ಸತಿಯ ಮೆಚ್ಚಾದೆನೆಂಬ ಕಾರಣದಿಂದಲಿ, ಮರಳಿ ಕಾಮಿ ಆಗಬೇಕಾಯಿತು ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.