Index   ವಚನ - 24    Search  
 
ಅಯ್ಯಾ, ಪಾದೋದಕವ ಮುಗಿಸಿ ಪ್ರಸಾದವ ಮುಗಿಸಬೇಕಲ್ಲದೆ, ಪ್ರಸಾದವ ಮುಗಿಸಿ ಪಾದೋದಕವ ಮುಗಿಸಲಾಗದು. ಪ್ರಸಾದವು ಮುಗಿದ ಮೇಲೆ, ಪ್ರಸಾದೋದಕವಲ್ಲದೆ ಪಾದೋದಕವೆಲ್ಲುಂಟು ಹೇಳಾ? ಸಂಬಂಧಾಚರಣೆಗಳ ಮುಖದಿಂದ ಪ್ರಾಣಲಿಂಗಾರ್ಪಿತವಾದ ಮೇಲೆ ಇಷ್ಟಲಿಂಗಕ್ಕೆ ಪ್ರಸಾದವರ್ಪಿತವಯ್ಯಾ. ಪಾದೋದಕಸ್ವರೂಪವಾದ ಇಷ್ಟಲಿಂಗಕ್ಕೆ ಪಾದೋದಕವನರ್ಪಿಸಿ ಕೊಳಬೇಕಯ್ಯ. ಪ್ರಸಾದಸ್ವರೂಪವಾದ ಪ್ರಾಣಲಿಂಗಕ್ಕೆ ಪ್ರಸಾದವನರ್ಪಿಸಿ ಕೊಳಬೇಕಯ್ಯ, ಇಂತು ವಿಚಾರಮುಖದಿಂದ ಪಾದೋದಕ ಪ್ರಸಾದವ ದಿವಾರಾತ್ರಿಗಳೆನ್ನದೆ [ಕೊಂಡು] ಸಂತೃಪ್ತನಾದಡೆ, ಪ್ರಸಾದಲಿಂಗಕ್ಕಂಗವಾದ ಅಚ್ಚ ಶಿವಶರಣನೆಂಬೆ ನೋಡಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.