Index   ವಚನ - 34    Search  
 
ಅರ್ಘ್ಯಂ ಪಾದ್ಯಂ ತಥಾಚಮ್ಯಂ ಸ್ನಾನಂ ಪಂಚಾಮೃತಾದಿಭಿಃ ದರ್ಪಣಂ ಧೂಪದೀಪಂ ಚ ಚಾಮರಂ ಆತಪತ್ರಕಂ ಗೀತಂ ವಾದ್ಯಂ ತಥಾ ನೃತ್ಯಂ ನಮಸ್ಕಾರಂ ಜಪಂ ತಥಾ ಪ್ರದಕ್ಷಿಣಂ ಕ್ರಮೇಣೋಕ್ತಂ ಷೋಡಶಸ್ಯೋಪಚಾರಕಂ ಗಂಧಾಕ್ಷತಂ ಚ ಪುಷ್ಪಂ ಚ ವಸ್ತ್ರಾಭರಣಾನುಲೇಪನಂ ನೈವೇದ್ಯಂ ಚ ತಾಂಬೂಲಂ ಅರ್ಚನಂ ಚಾಷ್ಟಮಂ ಭವೇತ್ -ಇಂತು ಅಷ್ಟವಿಧಾರ್ಚನೆ ಷೋಡಶೋಪಚಾರವು. ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ ಮುಂತಾಗಿ ಮಾಡುವುದು. ಭಕ್ತಿ ಜ್ಞಾನ ವೈರಾಗ್ಯವಿದೆಂದರಿಯಲು ಮೋಕ್ಷ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.