Index   ವಚನ - 154    Search  
 
ನಿರಾಳದ ಅಷ್ಟದಳಕಮಲದೊಳಗೆ ನಿರಂಜನ ಚೌಕಮಧ್ಯ ನೋಡಾ. ಇದರ ಬೀಜಾಕ್ಷರದ ಭೇದವನರಿಯೆ, ನಿರಂಜನಪ್ರಣವ, ಅವಾಚ್ಯಪ್ರಣವ, ಕಲಾಪ್ರಣವ, ಆದಿಪ್ರಣವ, ಅನಾದಿಪ್ರಣವ, ಜ್ಯೋತಿಃಪ್ರಣವ, ಅಖಂಡಜ್ಯೋತಿಃಪ್ರಣವ, ಅಖಂಡಮಹಾಜ್ಯೋತಿಃಪ್ರಣವ, ಗೋಳಕಾಕಾರಪ್ರಣವ, ಅಖಂಡಗೋಳಕಾಕಾರಪ್ರಣವ. ಅಖಂಡಮಹಾಗೋಳಕಾಕಾರಪ್ರಣವ, ಇಂತೀ ನಿರಾಳದ ಅಷ್ಟದಳಕಮಲದೊಳಗೆ ನಿರಂಜನ ಚೌಕಮಧ್ಯ ನೋಡಾ. ಇದರ ಬೀಜಾಕ್ಷರದ ಭೇದವನೆನಗೆ ಕರುಣಿಸಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.