ಬ್ರಹ್ಮ ವಿಷ್ಣು ಮೊದಲಾದ ದೇವದಾನವ ಮಾನವರೆಲ್ಲರನೂ
ಆಸೆ ಘಾಸಿಮಾಡಿ ಕಾಡಿತ್ತು.
ಮಹತ್ತಪ್ಪ ವ್ರತನಿಯಮ ಗುರುತ್ವ ಉಳ್ಳವರನೂ
ಕೆಡಿಸಿ ಲಘುಮಾಡಿ ನಗೆಗೆಡೆಮಾಡಿತ್ತು.
ಈ ಸಾಮರ್ಥ್ಯವುಳ್ಳ ಪುರುಷರನು ಘಾಸಿಮಾಡಿ ಸೋಲಿಸಿ
ತಾನು ಗೆಲ್ಲುವ ಸಾಮರ್ಥ್ಯವುಳ್ಳ ಆಸೆ ಇದೇನೋ!
ಎಂದು ವಿಚಾರಿಸಲು, ಶಿವಸಂಬಂಧಿ ಆಸೆಗೆ ಆಸಕ್ತನಾದಡೆ
ಶಿವನಾಜ್ಞೆಯಿಂದ ಕಾಡುವುದು,
ಶಿವನೊಲಿದವರ ಹೊದ್ದಲಮ್ಮದಯ್ಯಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.