Index   ವಚನ - 196    Search  
 
ಬ್ರಹ್ಮವೆಂಬುದನರಿದ ಬಳಿಕ ಅಷ್ಟಾದಶ ವಿದ್ಯವ ನೋಡುವ ಕೇಳುವ ಆಯಸವಿನ್ನದೇತಕಯ್ಯಾ? ಶ್ರೀಗುರುವನರಿದ ಬಳಿಕ ಮೇಲೆ ಬಯಸುವಾಯಸವದೇತಕಯ್ಯಾ? ಮನವೇ ಮಹಾವಸ್ತುವನರಿದ ಬಳಿಕ ಅಜ್ಞಾನಪ್ರಪಂಚು ಏತಕಯ್ಯಾ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.