Index   ವಚನ - 230    Search  
 
ಲಿಂಗಕ್ಕೆಯೂ ತನಗೆಯೂ ಭಿನ್ನಭಾವವಿಲ್ಲೆಂಬರು, ಲಿಂಗಕ್ಕೆಯೂ ತನಗೆಯೂ ಭಾಜನವೆರಡೆಂಬರು. ಬಂದಿತ್ತು ನೋಡಾ ತೊಡಕು. ಭಾಜನವೆರಡೆಂಬ ಮಾತೆರಡು, ಮಾತೆರಡಾದವಾಗಿ ಅಂಗವೆರಡಹುದು, ಅಂಗವೆರಡಿಪ್ಪಾತಂಗೆ ಲಿಂಗವಿಲ್ಲೆಂದೆನಿಸಿತ್ತು. ಲಿಂಗವಿಲ್ಲದಾತನು ಭವಿ ಎಂದೆನಿಸುವನು. ಇದು ಕಾರಣ, ಲಿಂಗದಲ್ಲಿ ಅವಿರಳವಾಗಿ ಅಂಗಗುಣಭಂಗವ ಕಳೆದು, ನಿರ್ಭಿನ್ನ ಮತನಾಗಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನಲ್ಲಿ, ಏಕಭಾಜನ ಸಮನಿಸಿತಯ್ಯ.