ಲಿಂಗವಂತನು ಲಿಂಗವಿಲ್ಲದವರ ಬಯಸಿದಡೆ ಆತಂಗೆ ಲಿಂಗವಿಲ್ಲ,
ಲಿಂಗವಿಲ್ಲದವನು ಆರಿಗೂ ಬಾತೆ ಅಲ್ಲ.
ಬಾತೆ ಅಲ್ಲದವಂಗೆ ಆರೂ ಸ್ನೇಹಿಸರು, ಆರು ಏನನೂ ಕೊಡರು.
ಇದು ಕಾರಣ, ದುರಾಶೆಯಂ ಬಿಟ್ಟು ನಿರಾಶೆಯಾಗಿ
ಲಿಂಗವನಾಶ್ರೈಸಿದಡೆ ಪ್ರಸಾದವಪ್ಪುದು
ಪ್ರಸಾದದಿಂದಿಹಪರ ಸಿದ್ಧಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
Art
Manuscript
Music
Courtesy:
Transliteration
Liṅgavantanu liṅgavilladavara bayasidaḍe ātaṅge liṅgavilla,
liṅgavilladavanu ārigū bāte alla.
Bāte alladavaṅge ārū snēhisaru, āru ēnanū koḍaru.
Idu kāraṇa, durāśeyaṁ biṭṭu nirāśeyāgi
liṅgavanāśraisidaḍe prasādavappudu
prasādadindihapara sid'dhi uriliṅgapeddipriya viśvēśvara.