Index   ವಚನ - 254    Search  
 
ಲಿಂಗವಿದ್ದುದೇ ಕೈಲಾಸ, ಲಿಂಗವಿದ್ದುದೇ ಕಾಶೀಕ್ಷೇತ್ರ ಲಿಂಗವಿದ್ದುದೇ ಅಷ್ಠಾಷಷ್ಟಿಮುಕ್ತಿಕ್ಷೇತ್ರ ಕಾಣಿರಣ್ಣಾ. ಇದು ಕಾರಣ, ಲಿಂಗವಿದ್ದ ಠಾವ ಕೇಳಿರೆ: ಲಿಂಗವಿದ್ದ ಠಾವು, ಭಕ್ತಕಾಯ ಮಮಕಾಯವೆಂದುದಾಗಿ ಭಕ್ತನ ಕಾಯ ಲಿಂಗಕಾಯ, `ಲಿಂಗಾಲಿಂಗೀ ಮಹಜ್ಜೀವಿ' ಎಂದುದಾಗಿ ಲಿಂಗವಂತನೇ ಲಿಂಗಪ್ರಾಣಿ ಕಾಣಿರಣ್ಣಾ. ಇಂತೆಂದುದಾಗಿ, ಶಿವಭಕ್ತನ ಸಂಗ ಲಿಂಗಸಂಗ, ಶಿವಭಕ್ತನ ಪಾದವೇ ಮುಕ್ತಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.