Index   ವಚನ - 355    Search  
 
ಹಿಂದಾದ ದುಃಖವನೂ ಇಂದಾದ ಸುಖವನೂ ಮರೆದೆಯಲ್ಲಾ! ಯಜಮಾನ, ನೀನು ಮರೆದ ಕಾರಣ ಬಂಧನ ಪ್ರಾಪ್ತಿಯಾಯಿತ್ತಲ್ಲಾ! ಹೇಮ ಭೂಮಿ ಕಾಮಿನಿ ಎಂಬ ಸಂಕೋಲೆಯಲ್ಲಿ ಬಂಧಿಸಿದರಲ್ಲಾ! ಅರಿಷಡ್ವರ್ಗವೆಂಬ ಬಂಧನದಲ್ಲಿ ದಂಡಿಸಿದರಲ್ಲಾ! ಲಿಂಗವ ಮರೆದಡೆ ಇದೇ ವಿಧಿಯಲ್ಲಾ! ಮರೆದಡೆ ಬಂಧನ ಅರಿದಡೆ ಮೋಕ್ಷ. ಅರಿದ ಯಜಮಾನ ಇನ್ನು ಮರೆಯದಿರು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಪರಿಯನು.