Index   ವಚನ - 9    Search  
 
ಅಯ್ಯಾ, ಅನಾದಿ ಭಕ್ತ ಜಂಗಮದ ವಿವರವೆಂತೆಂದಡೆ: ಭಕ್ತನಂಗಮನಪ್ರಾಣಂಗಳೆಲ್ಲ ಭಸ್ಮ ಘುಂಟಿಕೆಯಂತೆ! ಜಂಗಮದಂಗಮನಪ್ರಾಣಂಗಳೆಲ್ಲ ರುದ್ರಾಕ್ಷಿಯಮಣಿಯಂತೆ! ಭಕ್ತನಂಗತ್ರಯಂಗಳು ಪಂಚಲೋಹದಂತೆ! ಜಂಗಮದಂಗತ್ರಯಂಗಳು ಮೃತ್ತಿಕಾಭಾಂಡದಂತೆ! ಭಕ್ತನಂಗತ್ರಯಂಗಳು ಭಂಗಾರದಂತೆ! ಜಂಗಮದಂಗ ತ್ರಯಂಗಳು ಮೌಕ್ತಿಕದಂತೆ! ಭಕ್ತನಂಗತ್ರಯಂಗಳಲ್ಲಿ ನಡೆನುಡಿ ತಪ್ಪಿದಡೆ ಪ್ರಾಯಶ್ಚಿತ್ತವುಂಟಲ್ಲದೆ ಜಂಗಮದಂಗತ್ರಯಂಗಳಲ್ಲಿ ನಡೆನುಡಿ ತಪ್ಪಿದಡೆ ಪ್ರಾಣವೆ ಪ್ರಾಯಶ್ಚಿತ್ತವಲ್ಲದೆ ಪೂಜೆ ಆಚಾರಕ್ಕೆ ಯೋಗ್ಯವಲ್ಲ ಕಾಣಾ! ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆ!