Index   ವಚನ - 236    Search  
 
ಕಾಯಕ್ಕೆ ಕಲ್ಪಿತವುಂಟೆಂಬುದು ಹುಸಿಯೋ, ದಿಟವೋ ? ಜೀವಕ್ಕೆ ಜನ್ಮವುಂಟೆಂಬುದು ಹುಸಿಯೋ, ದಿಟವೋ ? ಕೆಂಡದೊಳಗೆ ಹೊಗೆಯಡಗಿತ್ತೋ, ಹೊಗೆಯಲ್ಲಿ ಕೆಂಡವಿದ್ದಿತ್ತೋ ? ಲಿಂಗದಲ್ಲಿ ಮನವಿದ್ದಿತ್ತೋ, ಮನದಲ್ಲಿ ಲಿಂಗವಡಗಿತ್ತೋ ? ಇಂತೀ ಉಭಯದ ಸಂದನಳಿದು ಬೆರಸಬಲ್ಲಡೆ ಆತನೆ ಪ್ರಾಣಲಿಂಗಿ, ನಿಃಕಳಂಕ ಮಲ್ಲಿಕಾರ್ಜುನಾ.