ಭಕ್ತ ಮಾಹೇಶ್ವರ ಪ್ರಸಾದಿ ಇಂತೀ ತ್ರಿವಿಧವನರಿತು,
ಆ ತ್ರಿವಿಧಸ್ಥಾನಂಗಳಲ್ಲಿ ಕಾಯ ಜೀವ ಭಾವ ಈ ತ್ರಿವಿಧವನರಿತು,
ಕಾಯದ ಕರ್ಮವ ಕಳೆದು, ಜೀವದ ಭವವ ಹಿಂಗಿಸಿ,
ಭಾವದ ಪ್ರಕೃತಿಯ ನಂದಿಸಿ,
ಇಷ್ಟಲಿಂಗವ ದೃಷ್ಟದ ತನುವಿಂಗೆ ಪ್ರಮಾಣಿಸುವಲ್ಲಿ,
ಅದು ಗುರುಸ್ಥಲಭಾವ, ಅಲ್ಲಿ ಮೂರುಸ್ಥಲ ಲೇಪ,
ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Bhakta māhēśvara prasādi intī trividhavanaritu,
ā trividhasthānaṅgaḷalli kāya jīva bhāva ī trividhavanaritu,
kāyada karmava kaḷedu, jīvada bhavava hiṅgisi,
bhāvada prakr̥tiya nandisi,
iṣṭaliṅgava dr̥ṣṭada tanuviṅge pramāṇisuvalli,
adu gurusthalabhāva, alli mūrusthala lēpa,
niḥkaḷaṅka mallikārjunā.