Index   ವಚನ - 723    Search  
 
ಸಂಜೀವನವ ಕೈಯಲ್ಲಿ ಹಿಡಿದಿರ್ದು, ಸಾವ ಹುಟ್ಟುವ ಜೀವವ ನಾ ಕಂಡೆ. ಕಂಗಳ ಮುಂದೆ ಕಡವರ ತುಂಬಿರ್ದು, ದಾರಿದ್ರ್ಯದಲ್ಲಿ ನೊಂದವರ ನಾ ಕಂಡೆ. ತನ್ನಂಗದಲ್ಲಿ ಅಲಗ ಹೊಣೆಯಾಗಿ ಹೊತ್ತಿರ್ದು, ಕೋಲಿನ ಹೊರೆಯ ಮೊನೆಯಲ್ಲಿ, ಇರಿಯಿಸಿಕೊಂಡು ಸತ್ತವರ ನಾ ಕಂಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯದೆ ಹೋದವರ.