ಸಕಲ ರೂಪೆಂದು, ನಿಃಕಲ ನಿರವಯವೆಂದು ಲಕ್ಷಿಸಿ ನುಡಿವಾಗ,
ಸಕಲವನರಿವುದು ನಿಃಕಲವೋ, ಸಕಲವೋ?
ಸಕಲವೆ ರೂಪಿಗೊಳಗಾದ ವಸ್ತು, ನಿಃಕಲವೆ ಒಡಲುಗೊಂಡ ವಸ್ತು.
ಅದು ಸೂತ್ರದ ನೂಲಿನಂತೆ ಕಡೆಗಾಣಿಸಿ ನಿಂದಲ್ಲಿ, ಬೊಂಬೆಗೆ ಹಾಹೆ ಉಂಟೆ ?
ಅಂಗಕ್ಕ ಕರ್ಮವಿಲ್ಲ, ಆತ್ಮಂಗಲ್ಲದೆ.
ಈ ದ್ವಂದ್ವದ ಸುಸಂಗದಲ್ಲಿ ನಿಂದು ನೋಡಲಾಗಿ,
ಅಂಗ ನಿರಂಗವೆಂಬುದು ಅಲ್ಲಿಯೆ ಅಡಗಿತ್ತು.
ಅದೇ ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Sakala rūpendu, niḥkala niravayavendu lakṣisi nuḍivāga,
sakalavanarivudu niḥkalavō, sakalavō?
Sakalave rūpigoḷagāda vastu, niḥkalave oḍalugoṇḍa vastu.
Adu sūtrada nūlinante kaḍegāṇisi nindalli, bombege hāhe uṇṭe?
Aṅgakka karmavilla, ātmaṅgallade.
Ī dvandvada susaṅgadalli nindu nōḍalāgi,
aṅga niraṅgavembudu alliye aḍagittu.
Adē aikyānubhāva, niḥkaḷaṅka mallikārjunā.