Index   ವಚನ - 65    Search  
 
ಪಂಚವರ್ಣದ ಭಸ್ಮವನು ಸಂಚಲಗುಣವಳಿದು, ಪಂಚಸ್ಥಾನದಲ್ಲಿ ಧರಿಸಬಲ್ಲಡೆ ಭಸ್ಮಧಾರಕರೆಂಬೆ. ಅಷ್ಟವರ್ಣದ ಭಸ್ಮವನು ಅಷ್ಟಗುಣ ನಷ್ಟಮಾಡಿ ಅಷ್ಟದಿಕ್ಕಿನಲ್ಲಿ ಧರಿಸಬಲ್ಲಡೆ ಭಸ್ಮಧಾರಕರೆಂಬೆ. ಬಯಲ ಸುಟ್ಟ ಬೂದಿಯ ನೀರಿಲ್ಲದೆ ಧರಿಸಬಲ್ಲಡೆ ಭಸ್ಮಧಾರಕರೆಂಬೆ. ಮನೆಯ ಸುಟ್ಟ ಬೂದಿಯ ಕೈಯಿಲ್ಲದೆ ಧರಿಸಿ ಶರಣು ಶರಣೆಂದು ಸತ್ತು ಕಾಯಕವ ಮಾಡುತಿರ್ದೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.